BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ದಿನಗಳ ಹಿಂದೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 10 ಪ್ರಗತಿಪರ ರೈತರು ಮತ್ತು ಮಹಿಳೆಯರಿಗೆ 2026ರ ಕೃಷಿ ಪ್ರಶಸ್ತಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 10 ಪ್ರಗತಿಪರ ರೈತರು ಮತ್ತು ಮಹಿಳೆಯರಿಗೆ 2026ರ ಕೃಷಿ ಪ್ರಶಸ್ತಿ
ಚಿತ್ರ: Prajavani

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನೀಡುವ 2026ನೇ ಸಾಲಿನ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 10 ಪ್ರಗತಿಪರ ರೈತರು, ರೈತ ಮಹಿಳೆಯರು ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿಗೆ ಚನ್ನಪಟ್ಟಣ ತಾಲ್ಲೂಕಿನ ಎನ್.ಕೆಂಪರಾಜು, ಪ್ರಗತಿಪರ ರೈತ ಮಹಿಳೆ ಪ್ರಶಸ್ತಿಗೆ ಮಾಗಡಿ ತಾಲ್ಲೂಕಿನ ಜಿ.ವನಜಾಕ್ಷಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಮಟ್ಟದ ಪ್ರಗತಿಪರ ರೈತ ಪ್ರಶಸ್ತಿಗೆ ಚನ್ನಪಟ್ಟಣ ತಾಲ್ಲೂಕಿನ ಜೆ.ಅಭಿಷೇಕ್ ಗೌಡ, ಕನಕಪುರ ತಾಲ್ಲೂಕಿನ ಬಿ.ಸಿ.ಚೇತನ್, ಮಾಗಡಿ ತಾಲ್ಲೂಕಿನ ಎಚ್.ಮಂಜೇಶ್, ರಾಮನಗರ ತಾಲ್ಲೂಕಿನ ಎಸ್.ರಾಕೇಶ್ ಆಯ್ಕೆಯಾಗಿದ್ದರೆ, ಪ್ರಗತಿಪರ ರೈತ ಮಹಿಳೆ ಪ್ರಶಸ್ತಿಗೆ ಚನ್ನಪಟ್ಟಣ ತಾಲ್ಲೂಕಿನ ವಿ.ಎಚ್.ಶಿಲ್ಪಾ, ಕನಕಪುರ ತಾಲ್ಲೂಕಿನ ಕಮಲ, ಮಾಗಡಿ ತಾಲ್ಲೂಕಿನ ಮಮತಾ, ರಾಮನಗರ ತಾಲ್ಲೂಕಿನ ಶ್ವೇತಾ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಕೃಷಿ ವಿಜ್ಞಾನ ಕೇಂದ್ರ ತಿಳಿಸಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruAgricultureAwards