BLR Today
ಶುಕ್ರವಾರ, ಅಕ್ಟೋಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬೆಂಗಳೂರು ಹೊರವಲಯದ 1,500 ಎಕರೆಯಲ್ಲಿ ಬೃಹತ್ 'ನಗರ ವನ' ನಿರ್ಮಾಣ; ಮುಖ್ಯಮಂತ್ರಿಗಳ ಅನುಮೋದನೆ ಬಾಕಿ

ಬೆಂಗಳೂರು ಹೊರವಲಯದ 1,500 ಎಕರೆಯಲ್ಲಿ ಬೃಹತ್ 'ನಗರ ವನ' ನಿರ್ಮಾಣ; ಮುಖ್ಯಮಂತ್ರಿಗಳ ಅನುಮೋದನೆ ಬಾಕಿ
ಚಿತ್ರ: Asianet Suvarna News

ಬೆಂಗಳೂರು ಹೊರವಲಯದ 1,500 ಎಕರೆ ಪ್ರದೇಶದಲ್ಲಿ 'ನಗರ ವನ' ಪ್ರಾಜೆಕ್ಟ್ ಸಿದ್ಧಪಡಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ 72ನೆಯ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರದೊಳಗಿನ ಜಾರಕ ಬಂಡೆ, ಪಣತ್ತೂರ್, ಮಂಡೂರು, ಕಲ್ಕೆರೆ, ಹಾಗೂ ಹೆನ್ನಾಗರ ಸೇರಿ ಸುಮಾರು 1500 ಎಕರೆ ಪ್ರದೇಶದಲ್ಲಿ ಈ ನಗರ ವನ ಪ್ರಾಜೆಕ್ಟ್ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು. ಈ ಪ್ರಾಜೆಕ್ಟ್ ಸಂಪೂರ್ಣ ಪರಿಸರಯುಕ್ತವಾಗಿದ್ದು, ಶುದ್ಧ ಗಾಳಿ ನೀಡಲು ಮತ್ತು ಪ್ರಾಣಿ ಪಕ್ಷಿ ಸಂಕುಲಗಳಿಗೆ ಉಪಯುಕ್ತವಾಗುವ ಮರಗಳನ್ನು ನೆಡಲಾಗುತ್ತದೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCity ForestEnvironmentDevelopment