ಯಡವನಹಳ್ಳಿಯಲ್ಲಿ ಹುಲಿ ದಾಳಿಯಿಂದ ರೈತ ಗಾಯ
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದ ಓಂಕಾರ ವಲಯ ವ್ಯಾಪ್ತಿಯ ಯಡವನಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ಜಾನುವಾರು ಮೇಯಿಸುತ್ತಿದ್ದ ರೈತ ಸಿದ್ಧಬಸವ ನಾಯಕ (70) ಅವರ ಮೇಲೆ ಹುಲಿ ದಾಳಿ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ. ಸಿದ್ಧಬಸವ ನಾಯಕ ಅವರ ಕೈ, ತೊಡೆ ಹಾಗೂ ಹೊಟ್ಟೆ ಮೇಲೆ ಹುಲಿ ಪರಚಿದ ಗಾಯಗಳಾಗಿವೆ. ದಾಳಿ ವೇಳೆ ಅವರು ಚೀರಾಡಿದ್ದನ್ನು ಕೇಳಿ ಅಕ್ಕಪಕ್ಕದ ರೈತರು ನೆರವಿಗೆ ಬಂದಾಗ ಹುಲಿ ಸ್ಥಳದಿಂದ ಓಡಿದೆ. ಅರಣ್ಯ ಅಧಿಕಾರಿಗಳು ಗಾಯಾಳು ವನ್ನು ಬೇಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.


