ಬನ್ನೇರುಘಟ್ಟ ಬಳಿ ಕೆರೆ ಕಾಮಗಾರಿ ವೇಳೆ ಮಣ್ಣಿನ ರಸ್ತೆ ಕುಸಿದು ಲಾರಿ ಪಲ್ಟಿ
ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವರದನಹಳ್ಳಿಯಲ್ಲಿ ಕೆರೆ ಕಾಮಗಾರಿ ವೇಳೆ ನಿರ್ಮಿಸಿರುವ ಮಣ್ಣಿನ ರಸ್ತೆ ಕುಸಿದು ಲಾರಿಯೊಂದು ಕೆರೆಗೆ ಪಲ್ಟಿಯಾಗಿದೆ. ಕೆರೆ ಅಭಿವೃದ್ಧಿ ಪಡಿಸಿ ಏರಿಯ ಎರಡು ಬದಿಗಳಲ್ಲಿ ಮಣ್ಣು ಹಾಕಲಾಗಿದೆ. ಲಾರಿ ಬರುತ್ತಿದ್ದಂತೆ ಮಣ್ಣು ಕುಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಎರಡು ತಾಸು ಸ್ಥಳೀಯರು ಹರಸಾಹಸ ಪಟ್ಟು ಲಾರಿಯನ್ನು ಮೇಲಕ್ಕೇತ್ತಿದ್ದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BannerghattaAnekal

