ಬನ್ನೇರುಘಟ್ಟ ಉದ್ಯಾನದಲ್ಲಿ ಪ್ರವಾಸಿಗರ ದಂಡು
ದೀಪಾವಳಿ ರಜೆ ಪ್ರಯುಕ್ತ ಸೋಮವಾರ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಸೋಮವಾರ 21 ಸಾವಿರ ಮಂದಿ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದರು. ಸಫಾರಿಯ ಮತ್ತು ಉದ್ಯಾನದ ಟಿಕೆಟ್ ಖರೀದಿಸಲು ಉದ್ದನೆಯ ಸಾಲು ಕಂಡು ಬಂತು. ಉದ್ಯಾನದ ಸಸ್ಯಹಾರಿ ಸಫಾರಿಯಲ್ಲಿ ಸಾರಂಗ, ಜಿಂಕೆಗಳು ಗುಂಪು ಪ್ರವಾಸಿಗರಿಗೆ ದರ್ಶನ ನೀಡಿದರು. ಕರಡಿ, ಚಿರತೆ ಸಫಾರಿಯಲ್ಲಿ ವನ್ಯಜೀವಿಗಳು ಹತ್ತಿರದಿಂದಲೇ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರು ಖಷಿಪಟ್ಟರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BannerghattaDiwaliTourismWildlife


