BLR Today
ಗುರುವಾರ, ಅಕ್ಟೋಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBanashankari2 ಗಂಟೆಗಳ ಹಿಂದೆ

ಹೂವಿನಹಡಗಲಿಯಲ್ಲಿ ವಿಜಯದಶಮಿ ಹಬ್ಬದ ಪಲ್ಲಕ್ಕಿ ಮೆರವಣಿಗೆ ಸಂಭ್ರಮ

ಹೂವಿನಹಡಗಲಿಯಲ್ಲಿ ವಿಜಯದಶಮಿ ಹಬ್ಬದ ಪಲ್ಲಕ್ಕಿ ಮೆರವಣಿಗೆ ಸಂಭ್ರಮ
ಚಿತ್ರ: Prajavani

ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿಜಯದಶಮಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ವೀರಭದ್ರೇಶ್ವರ, ಗೋಣಿಬಸವೇಶ್ವರ, ಭಂಗೀರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವಗಳನ್ನು ಹೊರಡಿಸಿ, ಪ್ರಮುಖ ಬೀದಿಯಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಲಾಯಿತು. ಯಲ್ಲಮ್ಮದೇವಿ, ಗಾಳೆಮ್ಮ ದೇವಿ, ಸಾರಿ ದುರುಗಮ್ಮ, ಕಾಳಿಕಾದೇವಿ, ಬನಶಂಕರಿ ದೇವಿಯ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಏಕಕಾಲಕ್ಕೆ ನಡೆಸಲಾಯಿತು. ಗೋಣಿಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ದೇವರುಗಳಿಗೆ ಬನ್ನಿ ಅರ್ಪಿಸಲಾಯಿತು. ನಂತರ ಹಿರೇಮಲ್ಲನಕೆರೆ ಮಠದಲ್ಲಿ ಸಾಂಪ್ರದಾಯಿಕ ಬನ್ನಿಮುಡಿಯುವ ಆಚರಣೆ ಜರುಗಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruFestivalReligionHoovinahadagali