ನವರಾತ್ರಿ ಹಬ್ಬದ ಅಂಗವಾಗಿ ಬನಶಂಕರಿ ದೇವಸ್ಥಾನದಲ್ಲಿ ದುರ್ಗಾದೌಡ್ ಕಾರ್ಯಕ್ರಮ ಆಯೋಜನೆ
ನವರಾತ್ರಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿರುವ 5ನೇ ವರ್ಷದ ದುರ್ಗಾದೌಡ್ ಕಾರ್ಯಕ್ರಮ ನಡೆಯುತ್ತಿದೆ. ಗುರುವಾರ ಬಸ್ತಿಬಣದ ಬನಶಂಕರಿ ದೇವಸ್ಥಾನಕ್ಕೆ ದುರ್ಗಾದೌಡ್ ಮೆರವಣಿಗೆ ಆಗಮಿಸಿತು. ಬಸ್ತಿಬಣ ಮ್ಯಾಗೇರಿ ಓಣಿಯ ದುರ್ಗಾದೇವಿ ಗುಡಿಯಿಂದ ಆರಂಭವಾದ ಮೆರಣಿಗೆಯು ಅಗ್ನಿಸೋಮೇಶ್ವರ, ಮೂಕಬಸವೇಶ್ವರ, ಶನೇಶ್ವರ, ಅಯ್ಯಪ್ಪಸ್ವಾಮಿ, ಮಾರುತಿ, ಕೌಲಪೇಟೆಯ ಗಣಪತಿ, ಸಿದ್ಧಿಪ್ರದಾಯಿನಿ ದೇವಸ್ಥಾನ ಹಾಗೂ ಶಂಖಬಸದಿಗೆ ಭೇಟಿ ನೀಡಿ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BanashankariNavaratriDurga DawadBengaluru


