BLR Today
ಮಂಗಳವಾರ, ಅಕ್ಟೋಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBanashankari4 ಗಂಟೆಗಳ ಹಿಂದೆ

ದಸರಾ ಸಾಂಸ್ಕೃತಿಕ ಉತ್ಸವ ಅ.11 ರಿಂದ 19 ರವರೆಗೆ ಮಹಾಲಿಂಗಪುರದಲ್ಲಿ

ದಸರಾ ಸಾಂಸ್ಕೃತಿಕ ಉತ್ಸವ ಅ.11 ರಿಂದ 19 ರವರೆಗೆ ಮಹಾಲಿಂಗಪುರದಲ್ಲಿ
ಚಿತ್ರ: Prajavani

ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದ ಆಶ್ರಯದಲ್ಲಿ ಅ.11 ರಿಂದ 19 ರವರೆಗೆ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿವೆ. ಪ್ರತಿದಿನ ಸಂಜೆ 7ರಿಂದ 8 ಗಂಟೆವರೆಗೆ ಸಾಲೋಟಗಿಯ ಸಂಗಮೇಶ್ವರ ಸ್ವಾಮೀಜಿ ಶ್ರೀದೇವಿ ಪುರಾಣ ಹೇಳುವರು. ಕಾರ್ಯಕ್ರಮ ಅಂಗವಾಗಿ ಅ.13 ರಂದು ಅನ್ನಪೂರ್ಣೇಶ್ವರಿ ಮಹಿಳಾ ಸಂಘದಿಂದ ಕುಂಕುಮಾರ್ಚನೆ ಹಾಗೂ ಅ.16 ರಂದು ಶೋಭಾ ಹುಣಶ್ಯಾಳ ಅವರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBanashankariDasaaraFestival