BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧAnekal7 ದಿನಗಳ ಹಿಂದೆ

ಬೆಂಗಳೂರು ಜೈಲಿನಿಂದ ಪರೋಲ್ ಮೇಲೆ ಓಡಿಹೋದ ಕೈದಿ

ಬೆಂಗಳೂರು ಜೈಲಿನಿಂದ ಪರೋಲ್ ಮೇಲೆ ಓಡಿಹೋದ ಕೈದಿ
ಚಿತ್ರ: TV9 Kannada

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪರೋಲ್ ಮೇಲೆ ಬಿಡುಗಡೆಯಾಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ತಲೆಮರೆಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ ಎಂಬಾತ ಪೆರೋಲ್ ಅವಧಿ ಮುಗಿದಿದ್ದರೂ ಜೈಲಿಗೆ ವಾಪಸ್​ ಆಗದೆ ಪರಾರಿಯಾಗಿದ್ದಾನೆ. ಹುಸೇನ್, ಕಿಡ್ನ್ಯಾಪ್ ಆ್ಯಂಡ್ ಮರ್ಡರ್ ಪ್ರಕರಣದ ಕೈದಿಯಾಗಿದ್ದು, 2021ರಲ್ಲಿ ಚಿಕ್ಕಬಳ್ಳಾಪುರ ಎರಡನೇ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂ ದಂಡ ವಿಧಿಸಿತ್ತು. ಸೆಪ್ಟೆಂಬರ್ 10ರಂದು ನ್ಯಾಯಾಲಯದ ಆದೇಶದ ಮೇರೆಗೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಈತ, ಸೆಪ್ಟೆಂಬರ್ 8ರಂದು ಜೈಲಿಗೆ ವಾಪಸಾಗಬೇಕಿತ್ತು. ಆದರೆ ಜೈಲಿಗೆ ಶರಣಾಗದೆ ತಲೆಮರೆಸಿಕೊಂಡಿದ್ದಾನೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeParappana Agrahara JailAnekal