BLR Today
ಶನಿವಾರ, ಅಕ್ಟೋಬರ್ 3, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿAnekal3 ಗಂಟೆಗಳ ಹಿಂದೆ

ಬೊಮ್ಮಸಂದ್ರದಲ್ಲಿ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಬೊಮ್ಮಸಂದ್ರದಲ್ಲಿ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಚಿತ್ರ: Prajavani

ಬೊಮ್ಮಸಂದ್ರ ಪುರಸಭೆಯಿಂದ ಶುಕ್ರವಾರ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಬೊಮ್ಮಸಂದ್ರ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್‌ ಅವರು, 'ಮಹಾತ್ಮ ಗಾಂಧೀಜಿ ಜೀವನವೇ ಒಂದು ಸಂದೇಶವಾಗಿದೆ. ಅವರ ಚಿಂತನೆ ಗಾಂಧಿ ಜಯಂತಿಗೆ ಸೀಮಿತವಾಗದೆ ಜೀವನದ ಭಾಗವಾಗಬೇಕು' ಎಂದರು. ಪುರಸಭೆ ಪರಿಸರ ಎಂಜಿನಿಯರ್ ಉಮಾ, ಕಚೇರಿ ವ್ಯವಸ್ಥಾಪಕ ರಾಜಶೇಖರ್‌, ಕಿರಿಯ ಎಂಜಿನಿಯರ್ ಚಂದ್ರಶೇಖರ್, ಕಂದಾಯ ನಿರೀಕ್ಷಕ ಮಂಜುನಾಥ್‌ ಉಪಸ್ಥಿತರಿದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AnekalBommasandraBengaluru