BLR Today
ಬುಧವಾರ, ಅಕ್ಟೋಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯAnekal, Chandapura2 ಗಂಟೆಗಳ ಹಿಂದೆ

ಚಂದಾಪುರ ಪುರಸಭೆ ಅಧ್ಯಕ್ಷರಾಗಿ ಶೋಭ ಚರಣ್‌ ಅವಿರೋಧ ಆಯ್ಕೆ

ಚಂದಾಪುರ ಪುರಸಭೆ ಅಧ್ಯಕ್ಷರಾಗಿ ಶೋಭ ಚರಣ್‌ ಅವಿರೋಧ ಆಯ್ಕೆ
ಚಿತ್ರ: Prajavani

ಬಿಜೆಪಿಯಿಂದ ಶೋಭ ಚರಣ್‌ ಚಂದಾಪುರ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಪುರಸಭೆ ಅಧ್ಯಕ್ಷೆ ಜ್ಯೋತಿ ಜಗದೀಶಾಚಾರಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಶೋಭ ಚರಣ್ ಮಾತನಾಡಿ, ಚಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಡೆಯುವುದು ಪ್ರಮುಖ ಗುರಿ. ಅಗತ್ಯವಿರುವೆಡೆ ಸಂಚಾರಿ ದೀಪಗಳನ್ನು ಅಳವಡಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲು ಎಲ್ಲಾ ಸದಸ್ಯರು ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು. ಬೀದಿ ಬದಿ ವ್ಯಾಪಾರಿಗೆ ಪರ್ಯಾಯ ಜಾಗ ನೀಡಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
ChandapuraAnekalBJPPurasabha