BLR Today
ಸೋಮವಾರ, ಅಕ್ಟೋಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರAnekal2 ಗಂಟೆಗಳ ಹಿಂದೆ

ಆನೇಕಲ್ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿದ್ದ ಟೆಕಿ ಶವ ಮೂರು ದಿನ ಬಳಿಕ ಪತ್ತೆ

ಆನೇಕಲ್ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿದ್ದ ಟೆಕಿ ಶವ ಮೂರು ದಿನ ಬಳಿಕ ಪತ್ತೆ
ಚಿತ್ರ: Prajavani

ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿದ್ದ ಟೆಕಿ ಮೃತದೇಹವನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಈಶ್ವರ್‌ ಮಲ್ಪೆ ಅವರ ತಂಡ ಭಾನುವಾರ ಪತ್ತೆ ಹಚ್ಚಿ, ಹೊರೆ ತೆಗೆದಿದೆ. ಅ.2ರಂದು ಜಿಗಣಿ ಹೋಬಳಿ ಮಹಾಂತಲಿಂಗಾಪುರ ಸಮೀಪದ ಸಿದ್ದಯ್ಯನದೊಡ್ಡಿಯ ಕ್ವಾರಿಯಲ್ಲಿ ಈಜಲು ಹೋಗಿ ಗಣೇಶ್‌ ಆಂಜನೇಯ ವಿನಯ್‌(30) ಮೃತಪಟ್ಟಿದ್ದರು. ಶುಕ್ರವಾರ ಸಂಜೆಯಿಂದಲೂ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಅತ್ತಿಬೆಲೆ ಆಕ್ಸ್‌ಫರ್ಡ್‌ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AnekalJiganiNDRFSDRF