Bengaluru Today
ಮಂಗಳವಾರ, ಸೆಪ್ಟೆಂಬರ್ 22, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರAnekal3 ಗಂಟೆಗಳ ಹಿಂದೆ

ಆನೇಕಲ್‌ನಲ್ಲಿ ಸ್ವಸಹಾಯ ಸಂಘಗಳಿಗೆ ₹10 ಕೋಟಿ ಸಾಲ ವಿತರಣೆ

ಆನೇಕಲ್‌ನಲ್ಲಿ ಸ್ವಸಹಾಯ ಸಂಘಗಳಿಗೆ ₹10 ಕೋಟಿ ಸಾಲ ವಿತರಣೆ
ಚಿತ್ರ: Prajavani

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರ ಸಂಘದಿಂದ ಸ್ವಸಹಾಯ ಸಂಘಗಳು ಮತ್ತು ವಿಎಸ್‌ಎಸ್‌ಎನ್‌ ಬ್ಯಾಂಕ್‌ಗಳಿಗೆ ಒಟ್ಟು ₹10 ಕೋಟಿ ಸಾಲದ ಚೆಕ್‌ಗಳನ್ನು ಸೋಮವಾರ ವಿತರಿಸಲಾಯಿತು. ಪಟ್ಟಣದ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘ, ರೈತರಿಗೆ ಕಿಸಾನ್ ಕ್ರೆಡಿಟ್, ಮಧ್ಯಮ ಅವಧಿ ಸಾಲ, ಮನೆ ಸಾಲ ವಿತರಣೆ ಮಾಡಲಾಯಿತು. ಶಾಸಕ ಬಿ ಶಿವಣ್ಣ ಅವರು ಮಾತನಾಡುತ್ತಾ, 'ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲವನ್ನು ರೈತರು ಸದುಪಯೋಗಪಡಿಸಿಕೊಂಡು ಸಬಲರಾಬಗಬೇಕು. ಸಕಾಲದಲ್ಲಿ ಮರು ಪಾವತಿ ಮಾಡಬೇಕು' ಎಂದು ಹೇಳಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AnekalBengaluruLoanSelf-Help Group